Raga: Kalyani
Tala: Triputa
Pallavi
ಜಯ ಜಯ ಶ್ರೀನಿವಾಸ ಜಯ ಜೀಮುತಾಭ ಜಯ ಜಯ ಶ್ರೀನಿವಾಸ
Anupallavi
ಭಯಕಾರಣ-ವಿನಾಶ ಭಕ್ತ-ಮಾನಸ-ನಿವಾಸ (ಜಯ..)
Charanam
೧.
ಕಮಲದಲ-ನಯನ ಕನಕಮಯ-ವಸನ
ರಮಣೀಯ-ಚಂದ್ರಾನನ ರಂಜಿತ-ಭುವನ
ಕಮಲಾ-ವಲ್ಲಭ ದೀನ-ಕಾಮಿತಫಲ-ನಿದಾನ
ಕಾಮಕೋಟಿ ಸಮಮೋಹನ
ಮಂಜುಲ-ಕಂಜವದನ ಮಹಾಮೋಹ-ವದನ
ಮಂಗಲ-ಫಲದಾನ ಮುನೀಂದ್ರ-ಬೃಂದಾಧೀನ (ಜಯ..)
೨.
ಸುಂದರ ಚರಣಾರವಿಂದ ಮಣಿನೂಪುರ
ಮಂಜುಲಮುಕ್ತಾಹಾರ ಮಂದರಧರ
ಕುಂದರದನ ಸುರವಂದಿತ ಮನೋಹರ
ಚಂದ್ರಿಕಾ-ಸಮ-ಸ್ಮೇರ ಬಾಲ
ನೀರದ-ಘನ-ನೀಲ ಪಾರಾವಾರ ವಿಹಾರ
ಪರಿಪಾಲಿತ ಭೂರಾದಿ-ಲೋಕ-ನಿಕರ (ಜಯ..)
೩.
ವಿಪುಲಪುಂಡರೀಕಾಕ್ಷ ವಿಶ್ವಸಂತ್ರಾಣದಕ್ಷ
ಅಪಹೃತಾಸುರಪಕ್ಷ ಆರ್ತಸಂರಕ್ಷ
ತಾಪಸಜನರಕ್ಷ ತಾರಣಾಧ್ವರದೀಕ್ಷ
ಆಪದುದ್ಧಾರ-ವೀಕ್ಷಾಮೋಕ್ಷ
ಅಶೇಷದುಷ್ಟಶಿಕ್ಷ ನಾನಾ-ನಿಗಮಾಲಕ್ಷ್ಯ
ನಾರಾಯ಼ಣತೀರ್ಥಪಕ್ಷ ಶ್ರೀ ಗೋಕುಲ-ಸಂರಕ್ಷ (ಜಯ…)
No comments:
Post a Comment